ಭಾನುವಾರ, ಮಾರ್ಚ್ 21, 2010

ಪ್ರಿಯೆ ನಿನ್ನ ಕಂಗಳ ಕಾಂತಿ-
ಮೂಡಿಸಿಹುದು ನನ್ನಲ್ಲಿ ಪ್ರೀತಿಯ ಭ್ರಾಂತಿ
ಚುಚ್ಚುತಿಹುದು ನನ್ನೆದೆಗೆ ಪ್ರೇಮದ ತಂತಿ
ಇನ್ನೆಲ್ಲಿ ನನ್ನೀ ಮನಕೆ ಶಾಂತಿ?
ನೀನೇ ನನ್ನ ಬಾಳಿನ ಸಂಕ್ರಾಂತಿ
ನೀ ದೊರಕದಿರೆ ನನ್ನ ಬಾಳೆಲ್ಲ ಗೋಳಿನ ಕ್ರಾಂತಿ.

ಬದಲಾವಣೆ

ಮದುವೆಗೆ ಮುನ್ನ
'ಚಿನ್ನಾ,ನೀನೇ ನನ್ನ ರನ್ನ'
ಎನ್ನುತ್ತಿದ್ದವ,ಈಗ-
ನೀನಿರದಿದ್ದರೆ ಬಹು ಚೆನ್ನ'
ಎಂದು ಹೇಳಬೇಕೇ?!

ಗಂಡ ಹೇಳ್ತಾನ

ನನ್ನಾಕೆ ನಕ್ರ
ಕಾಣ್ಸಲ್ಲ 32 ಹಲ್ಲು
ಯಾಕಂದ್ರ
ಅವಳಿಗಿಲ್ಲ
ಒಂದೂ...
ಹಲ್ಲು.

ಹೆಂಡತಿ ಹೇಳ್ತಾಳ

ನಮ್ಮೋರು ನಕ್ರ
ಕಾಣ್ಸಲ್ಲ 32 ಹಲ್ಲು
ಯಾಕಂದ್ರ
ನಾ ಉದುರ್ಸೀನಿ
ಮೊನ್ನೆ 2 ಹಲ್ಲು.

ಧನ್ಯವಾದ!

ಗೆಳತೀ
ಸಂತಸವ
ಬೀರದ
ಈ ಬರಡು
ಬಾಳಿಗೆ
ಪ್ರೀತಿಯ
ಬೆಳಕನು
ಚೆಲ್ಲಿ
ಹೊಸ
ತಿರುವು
ತಂದೆ.

ನನಸು-ಕನಸು.


ಲೇಖಕನೊಬ್ಬ ಬರೆದ
ಪುಸ್ತಕದ ಹೆಸರು-'ನನಸು'
ಆದರೆ ಅದನ್ನು ಪ್ರಕಟಿಸುವುದೇ
ಅವನ ಪಾಲಿಗೆ 'ದೊಡ್ಡ ಕನಸು'

ನಲ್ಲ ಬೇಡಿದ್ದು!

ಪ್ರಿಯೆ ಮುತ್ತೇಕೆ ಕೊಡುವೆ?
ನಾ ಕೇಳಿದ್ದು ನಿನ್ನ ವಡವೆ.
ಕೊಟ್ಟರೆ ನಾ ಕೇಳಿದ ವಡವೆ
ನನಗೇಕೆ ನಿನ್ನ ಗೊಡವೆ?
ಜೀವನದಲ್ಲಿ ಬರೀ
ದುಃಖ ಅನುಭವಿಸಿ
ಆದನವ ಕವಿ.
ಕವಿಯಾದ ಮೇಲೆ
ಇನ್ನಷ್ಟು ದುಃಖ ಅನುಭವಿಸಿ
ತೊಟ್ಟ ಕೊನೆಗೆ ಕಾವಿ.

ಪರಿಣಾಮ

ಸ್ವಾರ್ಥದ ಪರಿಧಿ (circumference)
ಹೆಚ್ಚಿದಂತೆಲ್ಲ
ಮನುಷ್ಯತ್ವದ ಸಾಂದ್ರತೆ (Density)
ಕುಗ್ಗುತ್ತಾ ಹೋಗುತ್ತದೆ.

(C=R=1/D)
'ಕವಿಯ ಕಲ್ಪನೆಯ ವಾಸ್ತವಿಕತೆ'
ಇಂದು ಬಾರದ ನಾಳೆಯಂತೆ.
ಅದು ನಿಜವಾಗುವ ವೇಳೆಗೆ
ಅವನ ಬಾಳು
'ಕಳೆದು ಹೋದ ನಿನ್ನೆಯಂತೆ'

ಕುರುಹು

ಪ್ರಿಯೆ, ನಿನ್ನ
ಸುಂದರವಾದ ಅಕ್ಷಿ
ಹಾಕಿಹುದು ನನ್ನೆದೆಯ
ಕೋಣೆಗೆ ಗವಾಕ್ಷಿ
ಇದುವೇ ನಮ್ಮಿಬ್ಬರ
ಪ್ರೇಮಕ್ಕೆ ಸಾಕ್ಷಿ.

ಮುತ್ತಿನ ಕರಾಮತ್ತು!

ಪ್ರಿಯೆ, ನೀ ಕೊಟ್ಟ ಮುತ್ತು
ಸುರಿಸಿಹುದು ಮತ್ತಿನ
ಮುತ್ತುಗಳನ್ನು
ಎನದರ ಕರಾಮತ್ತು?

ರಾಮಪ್ರಸಾದ್ ಭಟ್

ನನ್ನ ನಾ ಮೈ ಮರೆತಾಗೆಲ್ಲ
ನಿನ್ನ ನೆನಪಾಗಿ ನನ್ನ ನಾ
ಮರೆಯಬೇಕಾಯ್ತಲ್ಲ !
ನಿನ್ನ ಮರೆತಾಗ
ನನ್ನ ನೆನಪು ನನಗಾದಾಗ
ನಾ ಇಲ್ಲಿ
ಉಳಿಯಲಾಗಲೇ ಇಲ್ಲ
ಏಕೆಂದು ಗೊತ್ತೇ ಇಲ್ಲ !!
೨೩:೨೩:೦೭ -೧೭.೦೩.೨೦೧೦.
ಕಲ್ಲು ಎಸೆದೆ ಗಿಡದ ಮೇಲಿರೋ ಹಣ್ಣಿಗೆ
ಆದರದು ಬಡಿಯುತು ಅದರ ಕೆಳಗಿರೋ ಹೆಣ್ಣಿಗೆ
ಹೆದರಿ ನಾ ಅವಳ ಮುಖದ ಸಂನೆಗೆ
ಓಡುವಷ್ಟರಲ್ಲಿ ಬಾರಿಸಿದಳು ನನ್ನ ಕೆನ್ನೆಗೆ.
ಕನಸಿನಲ್ಲಿ ಕಂಡಾಗ
ಅಂಟಿಕೊಂಡಿದ್ದವು ಮುಖಕ್ಕೆ
ಚಿನ್ನದ ಮುತ್ತುಗಳು..
ಕಣ್ಣು ಬಿಟ್ಟು ಕನ್ನಡಿಯಲ್ಲಿ ನೋಡಿದಾಗ
ಮುಖದ ತುಂಬಾ ಮೊಡವೆಗಳು..!!!

ಪ್ರಶ್ನೆ !

ಕಲ್ಪನೆಯಲ್ಲೂ
ಕಲ್ಪಿಸಿಕೊಳ್ಳಲಾಗದ
ಕಲ್ಪನಾತೀತ
ಕಲ್ಪನೆಯನ್ನು
ಕಲ್ಪನಾತ್ಮಕ ಮನಸಿನಿಂದ
ಕಲ್ಪಿಸಿಕೊಳ್ಳಲು ಸಾಧ್ಯವೇ..?
ನಾ ಯಾರಿಗೂ
ಕಾಯುವುದಿಲ್ಲ
ಕಾಯುವ
ಜಾಯಮಾನವಂತೂ
ನನ್ನದಲ್ಲ
ಅದ ನೀವ್
ಬಯಸುವುದು ಸಲ್ಲ
ಇದ ತಿಳಿದರೆ
ನಿಮ್ಮ ಬಾಯಿಗೆ ಬೆಲ್ಲ !!

ಶುಕ್ರವಾರ, ಮಾರ್ಚ್ 19, 2010

ಎಲ್ಲೋ ಕಂಡ ಅವಳನ್ನು
ಮನದಲ್ಲೇ ಪ್ರೀತಿಸುತ್ತ
ಪ್ರೀತಿಗಾಗಿ ಹುಚ್ಚನಾದ.
ಪತ್ರಿಕೆಯೊಂದರಲ್ಲಿ
ಅವಳ ವೈಕುಂಠ ಸಮಾರಾಧನೆ
ಬಗ್ಗೆ ಓದಿದಾಗ ಅವ
ಹುಚ್ಚಾಸ್ಪತ್ರೆ ಸೇರಿದ!!!

ಜಿಗುಪ್ಸೆ.

ಬರೆದೂ.. ಬರೆದೂ ...
ಏಳೆಂಟು ಬಾರಿ ಪರೀಕ್ಷೆ
ಪಾಸಾಗದೆ....
ಇನ್ಮುಂದೆ ಸಾಕು ಅಂತ
ತೆಗೆದುಕೊಂಡ
ಸನ್ಯಾಸಿಯ ದೀಕ್ಷೆ!!!

ಗುರುವಾರ, ಮಾರ್ಚ್ 18, 2010

ಕನಸು-ನನಸು

ಕನಸಿನಲ್ಲಿ ಕಂಡಾಗ-
ಕೂಗುತ್ತಿದ್ದಳು ಮಲ್ಲಿಗೆ
ಪ್ರಿಯತಮಾ
ಎಂದು.
ಕಣ್ ಬಿಟ್ಟು ನೋಡಿದರೆ
ಕೂಗುತ್ತಿತ್ತೊಂದು ಕಪ್ಪಾದ ಕಾಗೆ
ಕಾ..ಕಾ...
ಎಂದು.

ಹೇಡಿ

'ಪ್ರೀತಿಯೇ ನನ್ನಸಿರು'
ಎನ್ನುತ್ತಿದ್ದವ
ಪ್ರೀತಿಸಿದವಳ ಕೈ
ಹಿಡಿಯಲಾಗದೆ
ಉಸಿರು ಬಿಟ್ಟನಂತೆ!!!

ಕವಿ-ಕಾವಿ

'ಪ್ರೇಮ-ಭಂಗ'ದ
ಕಾವ್ಯ
ಕಲ್ಪಿಸಿ ಬರೆಯುವನು
ಕವಿ
ಆದರೆ...
ನಿಜವಾಗಲೂ
ಪ್ರೇಮದಿಂದ
ವಂಚಿತನಾದಾಗ
ತೊಡುವನು
ಕಾವಿ.

ಬುಧವಾರ, ಮಾರ್ಚ್ 17, 2010

ಪ್ರಿಯೆ ನೀ ಅಲ್ಲೇ
ನಾ ಇಲ್ಲೇ
ನಮ್ಮಿಬ್ಬರ ಜೋಡಿ
ಭಲ್ಲೆ ಭಲ್ಲೆ
ಎನ್ನುತ್ತಿದ್ದವ
ಶ್ರೀಮಂತ ಹುಡುಗಿ
ಸಿಕ್ಕೊಡನೆ
ಹೇಳಿದ -
ನೀ ಇರು ಅಲ್ಲೇ
ನಾ ಇರುವೆ ಇಲ್ಲೇ
ನಿನ್ನ ಇನ್ನೆಂದೂ
ನಾ ವಲ್ಲೆ