ಶನಿವಾರ, ಸೆಪ್ಟೆಂಬರ್ 12, 2020

 ಹೆಂಡತಿಗೆ ಸಲಹೆ.


ಲಾಕರ್ನಲ್ಲಿ ಇಡೋಕೋಸ್ಕರ

ದುಡ್ಡು ಕೊಟ್ಟು ಚಿನ್ನ ಖರೀದಿಸುವ ಬದಲು

ಚಿನ್ನನ ಅಂಗಡೀಲೇ ಬಿಟ್ ಬಿಟ್ಟು

ದುಡ್ಡನ್ನ ಅಕೌಂಟ್ಗೆ ಹಾಕ್ಬಾರ್ದಾ ಮಾರಾಯ್ತಿ.

ಗುರುವಾರ, ಸೆಪ್ಟೆಂಬರ್ 10, 2020

ವಿವಾಹ ವಾರ್ಷಿಕೋತ್ಸವದಂದು.

ಪ್ರಿಯ ಸ(ತಿ)ಖಿ....


ನೀ ಬರೀ ಮಡದಿಯಲ್ಲ ಗೆಳತೀ;

ನನ್ನ ಬಾಳ ಪಯಣದ ಸಂಗಾತಿ...

ನೀ ಜೊತೆಗಿರಲು ಸದಾ ಮನಕೆ ಸುಖ-ಶಾಂತಿ;

ಅದುವೇ ನನ್ನ ಪಾಲಿಗೆ ಸಂಕ್ರಾಂತಿ.


ಜೀವನದಲ್ಲಿ ನಾ ಏಕಾಂಗಿ ಎನಿಸಿದಾಗ

ನೀ ಅರ್ಧಾಂಗಿಯಾದೆ.

ಬಳಲಿ ಬೆಂಡಾಗಿರುವ ಈ ಬಾಳಿಗೆ

ಪ್ರೀತಿಯುದಕವ ಚಿಮ್ಮಿದೆ.


ಸಂತಸದಿ ನೀ  ಆನಂದಿಸಿದೆ;

ನೋವಿನಲ್ಲಿ ನೀ ಭಾಗಿಯಾದೆ.

ಜವಾಬ್ದಾರಿಯ ಕಲಿಸಿದೆ;

ಸಂಸಾರವೇನೆಂದು ತಿಳಿಸಿದೆ


ಸಣ್ಣ ಪುಟ್ಟ ವಿಷಯಗಳನ್ನೂ ನೀ ಕೆದಕಿದೆ;

ನಿನ್ನಲ್ಲಿ ನನ್ನ ಬಗೆಗಿನ ಕಾಳಜಿಯ ತೋರಿದೆ.

ನನ್ನ ಕೋಪ, ನಿಂದನೆಗಳಿಂದ ಅದೆಷ್ಟು ನೊಂದೆ;

ಎಲ್ಲವ ಮರೆತು ನನ್ನ ಬಾಳಲ್ಲಿ ಪ್ರೀತಿಯ ತಂದೆ.


ಜೀವನದುದ್ದಕ್ಕೂ ನನಗೆ ಸಾಂಗತ್ಯ

ನೀಡುವೆಯೆಂದು ಆಣೆ ಮಾಡಿದೆ.

ನೋವು ನಲಿವಿನ ಕ್ಷಣಗಳಲ್ಲಿ ಸ್ಪಂದಿಸುತ

ನೀ ಕೊಟ್ಟ ಭಾಷೆ ಉಳಿಸಿಕೊಳ್ಳುತಿರುವೆ.



೧೭ ಮೇ ೨೦೨೦, ರಾತ್ರಿ ೧೧ ಗಂಟೆಗೆ.


ಭಾನುವಾರ, ಏಪ್ರಿಲ್ 19, 2020

Corona Jokes

ಕೊರೋನಾ ಜೋಕ್ಸ್:

ಕೊರೋನಾ......ಕ್ಯೂ ರೋನಾ? ತೋಢಾ ಸಂಭಾಲ್ಕೆ ರಹನಾ!!!

1. ರಮೇಶ: ಲೋ ಸುರೇಶ, 1 ತಿಂಗಳು ಊರಿಗೆ ಹೊರಟಿದ್ದೆ. ಆದ್ರೆ ನಮ್ ಏರಿಯಾದಲ್ಲಿ ಕಳ್ಳರ ಕಾಟ.
ಸುರೇಶ: ನಾಯಿ ಇದೆ ಎಚ್ಚರಿಕೆ ಅಂತ ಬೋರ್ಡ್ ಇದೆ ಅಲ್ವಾ?
ರಮೇಶ: ಹಾಗಿದ್ರೂ ಪಕ್ಕದ್ ಮನೇಲಿ ಕಳ್ಳತನ ಆಗಿದೆ.
ಸುರೇಶ: ಓಹ್ ಹೌದಾ? ಕೊರೋನ (corona) ಇದೆ ಎಚ್ಚರಿಕೆ ಅಂತ ಹೊಸ ಬೋರ್ಡ್ ಹಾಕಿಸಿಬಿಡು. ಕಳ್ಳರು ಉಡೀಸ್!!!!

2. ಗಣೇಶ: ಮಗಾ, ಕೊರೋನದಿಂದಾಗಿ ಟ್ರಾಫಿಕ್ ಪೋಲೀಸರ ಕಾಟ ಕಡಿಮೆ ಆಗಿದೆ ಅನ್ಸುತ್ತೆ.
ಸುರೇಶ: ಅದ್ಹೇಗೋ ಹೇಳ್ತೀಯ???
ಗಣೇಶ: ಮಾಸ್ಕ ಹಾಕ್ಕೊಂಡ್ ಕೆಮ್ಮಿದ್ರೆ ಸಾಕು , ಹೆಲ್ಮೇಟ್,ಡಿ ಎಲ್,ಆರ್ಸಿ ಏನೂ ಕೇಳದೆ ದೂರ ಓಡಿ ಹೋಗ್ತಾರೆ.

3. ರಾಮು: 2020 ವರ್ಷ ಈ ಡೆಡ್ಲಿ ಕೊರೋನಾದಿಂದಾಗಿ 20-20 ಮ್ಯಾಚ್ ಥರ ಆಗ್ಬಿಟ್ಟಿದೆ ಕಣೋ...
ಶಾಮು: ಅದ್ಹೇಗೋ ?
ರಾಮು: ಮತ್ತೆ, ಗೆಲ್ತೀವೋ,ಸೋಲ್ತೀವೋ,ಸಿಕ್ಸ ಹೊಡೀತೀವೋ ಇಲ್ಲ ವಿಕೆಟ್ ಒಪ್ಪಿಸ್ತೀವೋ ಒಂದೂ ಹೇಳೋಕ್ಕೋಗಲ್ಲ.

4. ಪುಟ್ಟಿ: ಅಪ್ಪಾ, ಎಲ್ಲರೂ ಕೊರೋನಾ ಅಂತ ತುಂಬಾ ಹೆದರುತ್ತಾ ಇದಾರಲ್ಲ, ಎಲ್ಲಿಂದ ಬಂತಪ್ಪ ಅದು?
ಅಪ್ಪ: ಚೀನಾದಿಂದ ಬಂತು ಪುಟ್ಟಿ.
ಪುಟ್ಟಿ: ಅದಕ್ಯಾಕೆ ಹೆದರೋದು, ವಾಪಸ್ ಚೀನಾಕ್ಕೆ ಬಿಟ್ಟು ಬಂದರಾಯ್ತು!!!!
ಅಪ್ಪ: ಹಾಂ!!!???!!!

5. ಗುಂಡ: ನಿಜ ಹೇಳಬೇಕೆಂದರೆ ಕೊರೋನಾಗೆ ಥ್ಯಾಂಕ್ಸ್ ಹೇಳಬೇಕು.
ತಿಮ್ಮ: ಎಲ್ರೂ ಹೆದರಿ ಸಾಯ್ತಾ ಇದ್ರೆ ನೀ ಏನ್ ಹಂಗ ಹೇಳ್ತಾ ಇದೀಯ?
ಗುಂಡ: ಹೂಂ ಮತ್ತೆ.. ಓದಿಲ್ಲ, ಬರೆಯೋದಿಲ್ಲ. ಶಾಲೆ ರಜೆ, ಪರೀಕ್ಷೆ ಬಂದ್. ಉಂಡು ತಿಂದು ಆರಾಮಾಗಿ ಟೀವಿ ನೋಡ್ತಾ ಕೂತ್ರೂ ಅಪ್ಪ ಅಮ್ಮ ಬೈಯೋದಿಲ್ಲ.
ತಿಮ್ಮ: ಹ್ಹ ಹ್ಹ ಹ್ಹ..

6. ರಮೇಶ್: ಲೋ ಸುರೇಶ್ ನೀನು ಯಾವ ಟೂಥ್ ಪೇಸ್ಟ್ ಬಳಸುತ್ತಿದ್ದೀಯ?
ಸುರೇಶ್: ಕ್ಲೋಸಪ್ ಕಣೋ..
ರಮೇಶ್: ಮೊದಲು ಬದಲಾಯಿಸು.
ಸುರೇಶ್: ಯಾಕೋ... ಏನಾಯ್ತು?
ರಮೇಶ್: ಕ್ಲೋಸಪ್ ನೀಂದ ಹುಡುಗೀರು ಕ್ಲೋಸ್ ಆಗ್ತಾರಂತ ಜಾಹೀರಾತಿನಲ್ಲಿ ನೋಡಿದ್ದೆ. ಕ್ಲೋಸ್ ಕಾಂಟ್ಯಾಕ್ಟನಿಂದ ಕೊರೋನಾ ಬರುತ್ತಂತೆ. ಅದಕ್ಕೇ....