ಗುರುವಾರ, ಅಕ್ಟೋಬರ್ 5, 2017

ಗಣೇಶನ ಪಂಚ್

ಗೋಲ್ಡನ್ ಸ್ಟಾರ್ ಗಣೇಶ್
ಹೇಳಿದ್ರು-
"ಹೊಡಿ ಒಂಬತ್ತು ಹೊಡಿ ಒಂಬತ್ತು".
ವಾಹ್ ವಾಹ್...
 
ಗೋಲ್ಡನ್ ಬಾರ್ ಗಣೇಶ 
ಹೇಳಿದ್ರು-
"ಕುಡಿ ತೊಂಬತ್ತು ಕುಡಿ ತೊಂಬತ್ತು".
ವಾಹ್ ರೆ ವಾಹ್....

ಸೋಮವಾರ, ಡಿಸೆಂಬರ್ 19, 2016

ಸಖತ್ ಪಂಚ್! 👊

ನನ್ನಾಕೆ ಕೇಳಿದ್ಲು-
ಚಿನ್ನಾ , ತೊಡಿಸುವೆಯಾ
1 ಕೆ.ಜಿ ಚಿನ್ನ....
ನಾ ಸಮಾಧಾನದಿ ಉತ್ತರಿಸಿದೆ-
ಖಂಡಿತವಾಗಿಯೂ ನನ್ನ ರನ್ನ
ಮೊದಲು ತಗ್ಗಿಸು
10 ಕೆ.ಜಿ ನಿನ್ನ ತೂಕವನ್ನ...

ಭಾನುವಾರ, ಮೇ 20, 2012

poem about a child


ಪುಟಾಣಿ ಮಗುವೇ ಪುಟಾಣಿ ಪಾಪು.. ಪುಟಾಣಿ ಪಾಪು...
ನಿನ್ನಯ ಮೊಗದಲ್ಲಿ ಸಂತಸದ ಛಾಪು
ನಿನ್ನಯ ಕಣ್ಣುಗಳೆದಷ್ಟು  ಹೊಳಪು ?
ಕೊಟ್ಟವರಾರು ಈ ಒನಪು?

ಚಿಂತೆಗಳಾವುವೂ ನಿನ್ನಲ್ಲಿಲ್ಲ
ಕೆಲಸ-ಕಾರ್ಯಗಳು ಬೇಕಾಗಿಲ್ಲ
ಆಟಿಕೆ-ಸಾಮಾನು ಸಿಕ್ಕರೆ ಎಲ್ಲ
ಆಟವ ಆಡುತ ನಲಿಯುವಿಯಲ್ಲ

ಎಲ್ಲರ ಕೋಪ ಕರಗಿಸುವೆ
ಬೈಯುವವರ ಮನ ತಣಿಸುವೆ
ನಿನ್ನಯ ಮುದ್ದು ಮುಖವನು ತೋರುವೆ
ಎಲ್ಲರಿಂದ ಅಕ್ಕರೆ ನೀ ಪಡೆವೆ

ಮಿಥ್ಯೆ, ಕಪಟಗಳ ಸುಳಿವಿಲ್ಲ
ರೋಷ-ದ್ವೇಷಗಳ ನೆರಳಿಲ್ಲ
ಆಟವ ಆಡಲು ಇರದಿದ್ದರೆ ನಾವೆಲ್ಲ
ಏಕಾಂತವದು ನಿನಗೆ ಸಲ್ಲ

ನೀನೇ ದೇವರ ನಿಜ ಸ್ವರೂಪ
ನಿನ್ನ ಕಂಡರೆ ಇಳಿವುದು ಕೋಪ
ಭೇದ-ಭಾವಗಳ ನಾನಾ ರೂಪ
ಇಲ್ಲದ ನೀನೇ ನಿಜವಾದ ಭೂಪ

ಜೋಗುಳ ಕೇಳಿ ನಿದ್ರಿಸುವೆ
ಹಾಡನು ಕೇಳಿ ಕುಣಿದಾಡುವೆ
ಹೊಸತನ್ನು ಕಂಡರೆ ಬೇಕೆನ್ನುವೆ
ಕೋಡಿಸದೆ ಹೋದರೆ ಹಟವ ಮಾಡುವೆ

ಏನೂ ಅರಿಯದ ಮುಗ್ದನು ನೀನು
ಆಟಿಕೆ ಸಿಕ್ಕರೆ ಸವಿದಂತೆ  ಜೇನು
ಸಹಿಸೆನು ನಾನು ಈ ಬೇಸರ ಜೀವನವನು
ನಿನ್ನಂತೆ ಮಗು ಆಗ ಬಯಸುವೆನು

ಮಂಗಳವಾರ, ಜುಲೈ 26, 2011

ಪ್ರಿಯೆ...
ನೀ ನನ್ನ ಜೊತೆಗಿರಲು
ನನಗದುವೆ ಸ್ವರ್ಗ
ವಾಹ್ .. ವಾಹ್..|| 2 ಸಾರಿ||

ನೀ ಕೈ ಕೊಟ್ಟರೆ
ಮತ್ತೊಬ್ಬಳನ್ನು ಹುಡುಕದೆ
ನನಗೆಲ್ಲಿದೆ ಬೇರೆ ಮಾರ್ಗ?
ವಾರೆ.... ವಾಹ್....!!!

ಭಾನುವಾರ, ಜುಲೈ 17, 2011

ನಿನಗಾಗಿ.... ನಿನ್ನದೆ ಧ್ಯಾನದಲ್ಲಿ...

ಚೆಲುವಿನ ಮೊಗದ ಹುಡುಗಿಯೇ
ಧಡ್ ಭಡ್ ಅಂತ ಹೊರಟೆ ನೀ ಎಲ್ಲಿಗೆ?
ಸ್ವಲ್ಪ ನಿಲ್ಲು, ನಾನೂ ಬರುವೆ ನಿನ್ನ ಜೊತೆಗೆ
ಹೊಗೋಣ ಇಬ್ಬರು ಹರಟುತ್ತಾ ಮೆಲ್ಲಗೆ.

ಕಾಣಿಸಿಕೊಳ್ತೀಯ ದಿನಕ್ಕೆರಡು ಬಾರಿ
ಮದ್ಯೆದಲ್ಲಿ ಹೋಗಿರ್ತೀಯ ನನ್ ಕಣ್ಣಿಂದ ಜಾರಿ
ಯಾಕೇ ಸತಾಯಿಸ್ತೀಯ ಬಾರಿ ಬಾರಿ
ಕರುಣೆ ತೋರಬಾರದೆ ಓ ಕನ್ನಡ ಕುವರಿ

ನೀ ಮುಡಿಯದಿದ್ದರೂ ಮಲ್ಲಿಗೆ
ಮುಡಿದಂತೆ ಭಾಸವಾಗುತ್ತಿದೆ ನನ್ನೀ ಕಣ್ಣಿಗೆ.
ನೀ ಮಾತನಾಡದಿದ್ದರೂ ನನ್ನೊಂದಿಗೆ
ಮೌನವೆ ಪಿಸುಗುಡುವಂತೆ ಭಾಸವಾಗುತಿದೆ ಮನಸ್ಸಿಗೆ.

ನಿನ್ನಾ ಕೆಂದುಟಿಯ ಕಿರುನಗೆಗೆ
ಕಾದೂ ಕಾದೂ ಆದೆ ನಾ ಸಣ್ಣಗೆ
ಒಮ್ಮೆಯಾದರೂ ನಗೆ ಬೀರೆಯಾ ಮೆಲ್ಲಗೆ
ಆಗುವುದರೊಳಗೆ ನಾ ಮೆತ್ತಗೆ.

ಶುಕ್ರವಾರ, ಡಿಸೆಂಬರ್ 31, 2010

ನನ್ನ ಗಾದೆಗಳು...

೧.ಬಾಯಲ್ಲಿ ಬೆಣ್ಣೆ, ಬಗಲಲ್ಲಿ ದೊಣ್ಣೆ.

೨.ಮೈಮೇಲೆ ಕಾವಿ,ಮನದೊಳಗೆ ಕೋವಿ.

೩.ಕೈಯಿಂದ ಸ್ವೀಟು, ಕೋಲಿಂದ ಏಟು.

೪.ಮೂರ್ಖನಿಗುಪದೇಶವ ನೀಡಲು ಹೋಗಿ ವ್ಯಕ್ತಿತ್ವಕ್ಕೆ ಗರ ಬಡಿಸಿಕೊಂದಂತೆ.

೫.ಊರ ಕೆರೇಲಿ ನೀರಿಲ್ಲವೆಂದು ಚಿಂತಿಸಿ ಗೌಡರ ಕೂದಲು ಉದುರಿದವಂತೆ.

೬.ನರಿಯ ಮುಂದೆ ನಗಾರಿ ಬಾರಿಸಿದಂತೆ.

ಗುರುವಾರ, ಡಿಸೆಂಬರ್ 2, 2010

ಪ್ರೀತಿಸಿದ ತಪ್ಪಿಗೆ ಪ್ರೀತಿ ಸಿಗಲಿಲ್ಲ
ನೋಯಿಸಿದ ತಪ್ಪಿಗೆ ಮಮತೆ ಮರೆಯಾಯ್ತಲ್ಲ
ಕಾಯಿಸಿದ ತಪ್ಪಿಗೆ ಸ್ನೇಹ ದೂರವಾಯ್ತಲ್ಲ
ಓ ದೇವರೇ... ಹುಟ್ಟಿದ ತಪ್ಪಿಗೆ ಯಾಕೆ ಇನ್ನೂಸಾವು ಬರ್ತಿಲ್ಲ...?