ಬುಧವಾರ, ನವೆಂಬರ್ 8, 2017

ಸಂಕ್ರಮಣ.

ಮನೆ ತುಂಬಾ ಸಂಭ್ರಮದ ವಾತಾವರಣ
ಅದಕ್ಕೆ ಕಾರಣ ಮಕರ ಸಂಕ್ರಮಣ
ಎಳ್ಳು-ಬೆಲ್ಲ ದ ಸಮ್ಮಿಶ್ರಣ
ಬನ್ನಿ ನಾವು-ನೀವು ಹಂಚಿಕೊಳ್ಳೋಣ.
ಹಾರೈಸುವೆ ಸಾಗುತಿರಲಿ ಗೆಲುವಿನತ್ತ ಪಯಣ.
ಪರಿಣಾಮ

ಆ ಹುಡುಗಿ ನೋಡಿದಳು
ನಗು ನಗುತ್ತಾ
ನನ್ನ ಕಡೆ ತಿರುಗಿ
ಆ ಖುಷಿಯಲ್ಲಿ
ಊಟ ತಿಂಡಿ ಮರೆತು
ನಾ ಹೋಗಿಬಿಟ್ಟೆ ಸೊರಗಿ.
ಸಖತ್ ಪಂಚ್! 👊

ನನ್ನಾಕೆ ಕೇಳಿದ್ಲು-
ಚಿನ್ನಾ , ತೊಡಿಸುವೆಯಾ
1 ಕೆ.ಜಿ ಚಿನ್ನ....
ನಾ ಸಮಾಧಾನದಿ ಉತ್ತರಿಸಿದೆ-
ಖಂಡಿತವಾಗಿಯೂ ನನ್ನ ರನ್ನ
ಮೊದಲು ತಗ್ಗಿಸು
10 ಕೆ.ಜಿ ನಿನ್ನ ತೂಕವನ್ನ...
ಶ್ರೇಷ್ಠತೆ.

ನನ್ನವಳು ನನಗಿಟ್ಟರೆ
ಪ್ರೀತಿಯಿಂದ ಸಿಹಿ ಮುತ್ತು
ಸಾಟಿಯಿಲ್ಲ ನಮ್ಮ ಪ್ರೀತಿಗೆ
ಬೇರಾವುದೇ ಸಂಪತ್ತು.

ಗುರುವಾರ, ಅಕ್ಟೋಬರ್ 5, 2017

ಗಣೇಶನ ಪಂಚ್

ಗೋಲ್ಡನ್ ಸ್ಟಾರ್ ಗಣೇಶ್
ಹೇಳಿದ್ರು-
"ಹೊಡಿ ಒಂಬತ್ತು ಹೊಡಿ ಒಂಬತ್ತು".
ವಾಹ್ ವಾಹ್...
 
ಗೋಲ್ಡನ್ ಬಾರ್ ಗಣೇಶ 
ಹೇಳಿದ್ರು-
"ಕುಡಿ ತೊಂಬತ್ತು ಕುಡಿ ತೊಂಬತ್ತು".
ವಾಹ್ ರೆ ವಾಹ್....

ಸೋಮವಾರ, ಡಿಸೆಂಬರ್ 19, 2016

ಸಖತ್ ಪಂಚ್! 👊

ನನ್ನಾಕೆ ಕೇಳಿದ್ಲು-
ಚಿನ್ನಾ , ತೊಡಿಸುವೆಯಾ
1 ಕೆ.ಜಿ ಚಿನ್ನ....
ನಾ ಸಮಾಧಾನದಿ ಉತ್ತರಿಸಿದೆ-
ಖಂಡಿತವಾಗಿಯೂ ನನ್ನ ರನ್ನ
ಮೊದಲು ತಗ್ಗಿಸು
10 ಕೆ.ಜಿ ನಿನ್ನ ತೂಕವನ್ನ...

ಭಾನುವಾರ, ಮೇ 20, 2012

poem about a child


ಪುಟಾಣಿ ಮಗುವೇ 



ಪುಟಾಣಿ ಪಾಪು.. ಪುಟಾಣಿ ಪಾಪು...
ನಿನ್ನಯ ಮೊಗದಲ್ಲಿ ಸಂತಸದ ಛಾಪು
ನಿನ್ನಯ ಕಣ್ಣುಗಳೆದಷ್ಟು  ಹೊಳಪು ?
ಕೊಟ್ಟವರಾರು ಈ ಒನಪು?

ಚಿಂತೆಗಳಾವುವೂ ನಿನ್ನಲ್ಲಿಲ್ಲ
ಕೆಲಸ-ಕಾರ್ಯಗಳು ಬೇಕಾಗಿಲ್ಲ
ಆಟಿಕೆ-ಸಾಮಾನು ಸಿಕ್ಕರೆ ಎಲ್ಲ
ಆಟವ ಆಡುತ ನಲಿಯುವಿಯಲ್ಲ

ಎಲ್ಲರ ಕೋಪ ಕರಗಿಸುವೆ
ಬೈಯುವವರ ಮನ ತಣಿಸುವೆ
ನಿನ್ನಯ ಮುದ್ದು ಮುಖವನು ತೋರುವೆ
ಎಲ್ಲರಿಂದ ಅಕ್ಕರೆ ನೀ ಪಡೆವೆ

ಮಿಥ್ಯೆ, ಕಪಟಗಳ ಸುಳಿವಿಲ್ಲ
ರೋಷ-ದ್ವೇಷಗಳ ನೆರಳಿಲ್ಲ
ಆಟವ ಆಡಲು ಇರದಿದ್ದರೆ ನಾವೆಲ್ಲ
ಏಕಾಂತವದು ನಿನಗೆ ಸಲ್ಲ

ನೀನೇ ದೇವರ ನಿಜ ಸ್ವರೂಪ
ನಿನ್ನ ಕಂಡರೆ ಇಳಿವುದು ಕೋಪ
ಭೇದ-ಭಾವಗಳ ನಾನಾ ರೂಪ
ಇಲ್ಲದ ನೀನೇ ನಿಜವಾದ ಭೂಪ

ಜೋಗುಳ ಕೇಳಿ ನಿದ್ರಿಸುವೆ
ಹಾಡನು ಕೇಳಿ ಕುಣಿದಾಡುವೆ
ಹೊಸತನ್ನು ಕಂಡರೆ ಬೇಕೆನ್ನುವೆ
ಕೋಡಿಸದೆ ಹೋದರೆ ಹಟವ ಮಾಡುವೆ

ಏನೂ ಅರಿಯದ ಮುಗ್ದನು ನೀನು
ಆಟಿಕೆ ಸಿಕ್ಕರೆ ಸವಿದಂತೆ  ಜೇನು
ಸಹಿಸೆನು ನಾನು ಈ ಬೇಸರ ಜೀವನವನು
ನಿನ್ನಂತೆ ಮಗು ಆಗ ಬಯಸುವೆನು