ಭಾನುವಾರ, ಮೇ 20, 2012

poem about a child


ಪುಟಾಣಿ ಮಗುವೇ ಪುಟಾಣಿ ಪಾಪು.. ಪುಟಾಣಿ ಪಾಪು...
ನಿನ್ನಯ ಮೊಗದಲ್ಲಿ ಸಂತಸದ ಛಾಪು
ನಿನ್ನಯ ಕಣ್ಣುಗಳೆದಷ್ಟು  ಹೊಳಪು ?
ಕೊಟ್ಟವರಾರು ಈ ಒನಪು?

ಚಿಂತೆಗಳಾವುವೂ ನಿನ್ನಲ್ಲಿಲ್ಲ
ಕೆಲಸ-ಕಾರ್ಯಗಳು ಬೇಕಾಗಿಲ್ಲ
ಆಟಿಕೆ-ಸಾಮಾನು ಸಿಕ್ಕರೆ ಎಲ್ಲ
ಆಟವ ಆಡುತ ನಲಿಯುವಿಯಲ್ಲ

ಎಲ್ಲರ ಕೋಪ ಕರಗಿಸುವೆ
ಬೈಯುವವರ ಮನ ತಣಿಸುವೆ
ನಿನ್ನಯ ಮುದ್ದು ಮುಖವನು ತೋರುವೆ
ಎಲ್ಲರಿಂದ ಅಕ್ಕರೆ ನೀ ಪಡೆವೆ

ಮಿಥ್ಯೆ, ಕಪಟಗಳ ಸುಳಿವಿಲ್ಲ
ರೋಷ-ದ್ವೇಷಗಳ ನೆರಳಿಲ್ಲ
ಆಟವ ಆಡಲು ಇರದಿದ್ದರೆ ನಾವೆಲ್ಲ
ಏಕಾಂತವದು ನಿನಗೆ ಸಲ್ಲ

ನೀನೇ ದೇವರ ನಿಜ ಸ್ವರೂಪ
ನಿನ್ನ ಕಂಡರೆ ಇಳಿವುದು ಕೋಪ
ಭೇದ-ಭಾವಗಳ ನಾನಾ ರೂಪ
ಇಲ್ಲದ ನೀನೇ ನಿಜವಾದ ಭೂಪ

ಜೋಗುಳ ಕೇಳಿ ನಿದ್ರಿಸುವೆ
ಹಾಡನು ಕೇಳಿ ಕುಣಿದಾಡುವೆ
ಹೊಸತನ್ನು ಕಂಡರೆ ಬೇಕೆನ್ನುವೆ
ಕೋಡಿಸದೆ ಹೋದರೆ ಹಟವ ಮಾಡುವೆ

ಏನೂ ಅರಿಯದ ಮುಗ್ದನು ನೀನು
ಆಟಿಕೆ ಸಿಕ್ಕರೆ ಸವಿದಂತೆ  ಜೇನು
ಸಹಿಸೆನು ನಾನು ಈ ಬೇಸರ ಜೀವನವನು
ನಿನ್ನಂತೆ ಮಗು ಆಗ ಬಯಸುವೆನು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ