ಹಾಕಿದ್ದರೆ ರಾವಣ ಶ್ರೀ ರಾಮನಿಗೆ
Some ಹಾರ,
ತಪ್ಪುತ್ತಿತ್ತೇನೋ ಶ್ರೀ ರಾಮನಿಂದ
ಅವನ ಸಂಹಾರ.
ಪ್ರಿಯ ಸ(ತಿ)ಖಿ....
ನೀ ಬರೀ ಮಡದಿಯಲ್ಲ ಗೆಳತೀ;
ನನ್ನ ಬಾಳ ಪಯಣದ ಸಂಗಾತಿ...
ನೀ ಜೊತೆಗಿರಲು ಸದಾ ಮನಕೆ ಸುಖ-ಶಾಂತಿ;
ಅದುವೇ ನನ್ನ ಪಾಲಿಗೆ ಸಂಕ್ರಾಂತಿ.
ಜೀವನದಲ್ಲಿ ನಾ ಏಕಾಂಗಿ ಎನಿಸಿದಾಗ
ನೀ ಅರ್ಧಾಂಗಿಯಾದೆ.
ಬಳಲಿ ಬೆಂಡಾಗಿರುವ ಈ ಬಾಳಿಗೆ
ಪ್ರೀತಿಯುದಕವ ಚಿಮ್ಮಿದೆ.
ಸಂತಸದಿ ನೀ ಆನಂದಿಸಿದೆ;
ನೋವಿನಲ್ಲಿ ನೀ ಭಾಗಿಯಾದೆ.
ಜವಾಬ್ದಾರಿಯ ಕಲಿಸಿದೆ;
ಸಂಸಾರವೇನೆಂದು ತಿಳಿಸಿದೆ
ಸಣ್ಣ ಪುಟ್ಟ ವಿಷಯಗಳನ್ನೂ ನೀ ಕೆದಕಿದೆ;
ನಿನ್ನಲ್ಲಿ ನನ್ನ ಬಗೆಗಿನ ಕಾಳಜಿಯ ತೋರಿದೆ.
ನನ್ನ ಕೋಪ, ನಿಂದನೆಗಳಿಂದ ಅದೆಷ್ಟು ನೊಂದೆ;
ಎಲ್ಲವ ಮರೆತು ನನ್ನ ಬಾಳಲ್ಲಿ ಪ್ರೀತಿಯ ತಂದೆ.
ಜೀವನದುದ್ದಕ್ಕೂ ನನಗೆ ಸಾಂಗತ್ಯ
ನೀಡುವೆಯೆಂದು ಆಣೆ ಮಾಡಿದೆ.
ನೋವು ನಲಿವಿನ ಕ್ಷಣಗಳಲ್ಲಿ ಸ್ಪಂದಿಸುತ
ನೀ ಕೊಟ್ಟ ಭಾಷೆ ಉಳಿಸಿಕೊಳ್ಳುತಿರುವೆ.
೧೭ ಮೇ ೨೦೨೦, ರಾತ್ರಿ ೧೧ ಗಂಟೆಗೆ.